
15th April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಎ.೧೪-ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ, ಸಧ್ಯಕ್ಕೆ ಸಮಾಜದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ದೃಷ್ಠಿಯಿಂದ ಜಿಲ್ಲೆಯ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ಏ.೨೦ ರಂದು ಪಂಚಮಸಾಲಿ ಸಮಾಜದ ರಾಜ್ಯಮಟ್ಟದ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ವಾಮೀಜಿ, ಅಂದಿನ ಸಭೆಯಲ್ಲಿ ಪಂಚಮಸಾಲಿ ಸಮಾಜದ ರಾಷ್ಟç, ರಾಜ್ಯ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಚಿವರು, ಶಾಸಕರು ಸೇರಿದಂತೆ ಸಮಾಜದ ಎಲ್ಲ ಜನರು ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು ಎಂದು ಹೇಳಿದರು.
ಮೀಸಲಾತಿ ಹೋರಾಟ ಪ್ರಾರಂಭಿಸಿದ್ದರಿAದಾಗಿ ಇಂದು ಸಮಾಜದ ಸಂಘಟನೆ ಜಗತ್ತಿನಾದ್ಯಂತ ಸದೃಢವಾಗಿದೆ. ನನ್ನ ಉದ್ದೇಶ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವುದು ಹಾಗೂ ಸಮಾಜಕ್ಕೆ ನ್ಯಾಯ ಒದಗಿಸುವುದಾಗಿದೆ ಎಂದ ಸ್ವಾಮೀಜಿ, ನಾನು ಸಮಾಜದ ಯಾವುದೇ ವ್ಯಕ್ತಿ ಪರವಾಗಿ ಹೋರಾಟ ಮಾಡಿಲ್ಲ. ಸಮಾಜದ ಹಿತಕ್ಕಾಗಿ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದರು.
ಸಮಾಜ ಸಂಘಟನೆಯ ಸಂದರ್ಭದಲ್ಲಿ ಕೆಲವರಲ್ಲಿ ಭಿನ್ನಾಭಿಪ್ರಾಯ, ಗೊಂದಲಗಳು ಇರುವುದು ಸಹಜ. ಇನ್ನು ಕೆಲವರು ಅಜ್ಞಾನ, ಆಸೆ, ಆಮಿಷಗಳಿಗೆ ಒಳಗಾಗಿ ಟೀಕೆ, ಟಿಪ್ಪಣೆ ಮಾಡುತ್ತಾರೆ. ಆದರೂ ನಾನು ಯಾರಿಗೂ ಉತ್ತರಿಸುವುದಿಲ್ಲ. ನಾವು ಮಾಡುವ ಕಾರ್ಯಗಳು ಒಳ್ಳೆಯದು ಎನ್ನುವವರೂ ನಮ್ಮವರೇ, ಒಳ್ಳೆಯದಲ್ಲ ಎನ್ನುವವರೂ ನಮ್ಮವರೇ. ಹೀಗಾಗಿ ಅವರನ್ನು ವಿರೋಧಿಸುವುದಿಲ್ಲ ಎಂದು ಹೇಳಿದ ಬಸವಜಯಮೃತ್ಯುಂಜಯ ಸ್ವಾಮೀಜಿ, ನಾನು ಭೌತಿಕತೆಗೆ ಒಳಗಾಗಿಲ್ಲ. ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಹೇಳಿದರು.
ನಾನು ಪೀಠ ಕಟ್ಟಿದ್ದು ಬಯಲಲ್ಲೇ. ಅಲ್ಲೇ ಇದ್ದು ಸಮಾಜ ಸಂಘಟನೆ ಮಾಡಿದ್ದೇನೆ. ಆಸ್ತಿ, ಅಂತಸ್ತು ಯಾವುದೂ ನನಗೆ ಮುಖ್ಯ ಅಲ್ಲ. ನನ್ನ ಸಮಾಜ ಮುಖ್ಯ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ಏನು ಸಲಹೆ ಕೊಡುತ್ತಾನೋ ಆ ರೀತಿ ನಡೆದುಕೊಳ್ಳುತ್ತೇನೆ. ಯಾರು ಏನೇ ಅಂದರೂ ಸಮಾಜದ ಹಿತದೃಷ್ಠಿಯಿಂದ ಸಹಿಸಿಕೊಂಡು ಬರುತ್ತಿದ್ದೇನೆ ಎಂದು ಹೇಳಿದ ಅವರು, ಉಂಟಾಗಿರುವ ಎಲ್ಲ ಭಿನ್ನಾಭಿಪ್ರಾಯಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಏ.೨೦ ರಂದು ಸಭೆಯನ್ನು ಕರೆಯಲಾಗಿದೆ ಎಂದರು.
ಮಠದ ಪೀಠಾಧಿಪತಿ ಬದಲಾವಣೆ ವಿಷಯದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಅವರು ನನ್ನನ್ನು ತಪ್ಪಾಗಿ ಅರ್ಥೆÊಸಿಕೊಂಡಿದ್ದಾರೆ. ಯಾರೆಲ್ಲಾ ಟೀಕೆ ಮಾಡಿದ್ದಾರೆ ಅವರೆಲ್ಲರೂ ನಮ್ಮವರೇ. ಅವರಿಗೆ ದೇವರು ಸದ್ಬುದ್ಧಿ ಕೊಡಲಿ. ಶ್ರೀ ಪೀಠದ ಬಗ್ಗೆ ಗೌರವ, ಅಭಿಮಾನ ಹೊಂದಿರುವ ಎಲ್ಲರೂ ಏ.೨೦ರ ಸಭೆಗೆ ಬರ್ತಾರೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ತಾವು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಉದ್ದೇಶ ಹೊಂದಿದ್ದೀರಿ ಎಂದು ಹೇಳುತ್ತಾರಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಬಸವಜಯಮೃತ್ಯುಂಜಯ ಸ್ವಾಮೀಜಿ, ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಮ್ಮ ಸಮಾಜದ ವ್ಯಕ್ತಿಗಳನ್ನು ಜನಪ್ರತಿನಿಧಿಗಳನ್ನಾಗಿ ಮಾಡಲು ತಯಾರು ಮಾಡುತ್ತೇನೆ ಎಂದು ಹೇಳಿದರು.
ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಇನ್ನುಳಿದ ಮೂವರನ್ನು ಸಹ ಅಮಾನತು ಮಾಡಿ: ಬಂಗ್ಲೆ ಮಲ್ಲಿಕಾರ್ಜುನ್
ಸಂವಿಧಾನ ಶಿಲ್ಪಿ ಡಾ,ಬಿ,ಆರ್,ಅಂಬೇಡ್ಕರವರ ೧೩೪ ನೇಯ ಜಯಂತೋತ್ಸವ ಅದ್ದೂರಿ ಸಂಭ್ರಮದ ಮೇರವಣಿಗೆ!!